KRCBC - Commission for Bible

ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ" (ಮತ್ತಾ. 12:41)

ಸರ್ವೇಶ್ವರನವಾಕ್ಯ ಯೋನನಿಗೆ ಬಂದಿತು, ಅದು ಅವನಿಗೆ, “ನಿನೆವೆ ಮಹಾನಗರದ ನಿವಾಸಿಗಳು ಎಷ್ಟು ದುಷ್ಟರೆಂಬುದು ನನಗೆ ತಿಳಿದುಬಂದಿದೆ. ನೀನು ಅಲ್ಲಿಗೆ ಹೋಗು, ಅವರನ್ನು ಕಟುವಾಗಿ ಖಂಡಿಸು”(ಅ 1:2) ಎಂದು ಹೇಳಿತು.ಆದರೆ ಯೋನನು ಆ ಸ್ವಾಮಿಯ ಸನ್ನಿಧಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿನೆವೆಗೆ ಹೋಗುವುದರ ಬದಲು ತಾರ್ಷಿಷಿಗೆ ಅಭಿಮುಖವಾಗಿ ಓಡಿಹೋಗಲು ಹೊರಟನು (ವ 3).ಆದರೆ ಸರ್ವೇಶ್ವರ ಸಮುದ್ರದಲ್ಲಿ ಬಿರುಗಾಳಿಯೊಂದನ್ನು ಬರಮಾಡಿದರು. ಅಲೆಗಳ ಹೊಡೆತಕ್ಕೆ ಹಡಗು ನುಚ್ಚುನೂರಾಗಿ ಒಡೆದುಹೋಗುವುದರಲ್ಲಿತ್ತು(ವ 4).ನೌಕಾಧಿಕಾರಿ ಬಂದು, ಅವನನ್ನು ಎಬ್ಬಿಸುತ್ತಾ: “ಏನಯ್ಯಾ, ಹಾಯಾಗಿ ಇಲ್ಲಿ ನಿದ್ರೆ ಮಾಡುತ್ತಿದ್ದೀಯಲ್ಲ, ಎದ್ದೇಳು. ನಿನ್ನ ದೇವರಿಗೆ ಮೊರೆಯಿಡು. ಅವರಾದರೂ ನಮ್ಮ ಮೇಲೆ ಕರುಣೆತೋರಿ, ನಾವು ನಾಶವಾಗದಂತೆ ಕಾಪಾಡಿಯಾರು,” ಎಂದನು(ವ 6). ಆಮೇಲೆ ನಾವಿಕರು: “ನಮಗೆ ಸಂಭವಿಸಿರುವ ಈ ದುರಂತಕ್ಕೆ ಕಾರಣ ಯಾರಿರಬಹುದು? ಬನ್ನಿ, ಚೀಟುಹಾಕಿ ನೋಡೋಣ” ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಂಡರು. ಹಾಗೆ ಮಾಡಿದಾಗ ಚೀಟು ಯೋನನ ಹೆಸರಿಗೆ ಬಂತು(ವ 7).ಆಗ ನಾವಿಕರು: “ನೀನು ಯಾರು? ಎಲ್ಲಿಂದ ಬಂದೆ? ಯಾವ ಕೆಲಸದ ಮೇಲೆ ಬಂದೆ? ನೀನು ಯಾವ ಜನಾಂಗದವನು? ಈ ದುರಂತಕ್ಕೆ ಕಾರಣ ಯಾರು?” ಎಂದು ಪ್ರಶ್ನಿಸಿದರು(ವ 8).

ಅದಕ್ಕೆ ಯೋನನು, “ನಾನು ಹಿಬ್ರಿಯನು. ಸಮುದ್ರವನ್ನೂ ಭೂಮಿಯನ್ನೂ ಸೃಷ್ಟಿಸಿದ ಪರಲೋಕ ದೇವರಾದ ಸರ್ವೇಶ್ವರನ ಭಕ್ತ ನಾನು,” ಎಂದು ಉತ್ತರಿಸಿದನು.ಅಲ್ಲದೆ ತಾನು ಆ ಸ್ವಾಮಿಯ ಸನ್ನಿಧಿಯಿಂದ ಓಡಿಹೋಗುತ್ತಿರುವುದಾಗಿಯೂ ತಿಳಿಸಿದನು (ವ 9-10).ಯೋನನು, “ನನ್ನನ್ನು ಎತ್ತಿ ಸಮುದ್ರಕ್ಕೆ ಎಸೆಯಿರಿ. ಆಗ ಅದು ಶಾಂತವಾಗುವುದು. ನೀವು ಇಂಥ ಭೀಕರ ಬಿರುಗಾಳಿಗೆ ತುತ್ತಾಗಲು ನಾನೇ ಕಾರಣ. ಇದನ್ನು ನಾನು ಚೆನ್ನಾಗಿ ಬಲ್ಲೆ,” ಎಂದನು (ವ 12).ಆಗ ಅವರು ಬೇರೆ ದಿಕ್ಕುತೋಚದೆ ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತಾ: “ಸ್ವಾಮಿ, ಈ ನಿರಪರಾಧಿಯ ಪ್ರಾಣಹಾನಿಗೆ ನಾವು ಹೊಣೆಯಲ್ಲ. ಇದಕ್ಕಾಗಿ ನಮ್ಮನ್ನು ನಾಶಮಾಡಬೇಡಿ(ವ 14). ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ?’ ಎಂದು ದೈನ್ಯದಿಂದ ಪ್ರಾರ್ಥಿಸಿದರು. ಬಳಿಕಅವರುಯೋನನನ್ನುಎತ್ತಿಸಮುದ್ರಕ್ಕೆಎಸೆದರು. ತಕ್ಷಣವೇ, ಭೋರ್ಗರೆಯುತ್ತಿದ್ದ ಸಮುದ್ರ ಶಾಂತವಾಯಿತು(ವ 15). ಸರ್ವೇಶ್ವರಸ್ವಾಮಿಯ ಆಜ್ಞಾನುಸಾರ ದೊಡ್ಡ ಮೀನೊಂದು ಬಂದು ಯೋನನನ್ನು ನುಂಗಿತು. ಅವನು ಅದರ ಹೊಟ್ಟೆಯಲ್ಲಿ ಮೂರು ಹಗಲು, ಮೂರು ಇರುಳು ಇದ್ದನು (v. 17).

ನಾವಿಕರು ಬೇರೆ ದಿಕ್ಕುತೋಚದೆ ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತಾ: “ಸ್ವಾಮಿ, ಈ ನಿರಪರಾಧಿಯ ಪ್ರಾಣಹಾನಿಗೆ ನಾವು ಹೊಣೆಯಲ್ಲ. ಇದಕ್ಕಾಗಿ ನಮ್ಮನ್ನು ನಾಶಮಾಡಬೇಡಿ. ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ?’ ಎಂದು ದೈನ್ಯದಿಂದ ಪ್ರಾರ್ಥಿಸಿದರು (ವ 14).ಜನರು ಸರ್ವೇಶ್ವರಸ್ವಾಮಿಗೆ ಬಹುವಾಗಿ ಭಯಪಟ್ಟರು; ಯಜ್ಞವನ್ನು ಅರ್ಪಿಸಿ, ಹರಕೆಗಳನ್ನು ಸಲ್ಲಿಸಿದರು (ವ 16).

ಈ ಹಂತದಲ್ಲಿ, ದೇವರು ಏನಾದರೂ ಅದ್ಭುತವನ್ನು ಮಾಡದ ಹೊರತು ಯೋನನಗತಿ ಮರಣಮಾತ್ರಎಂದು ನಾವಿಕರು ಮತ್ತು ಯೋನ ಇಬ್ಬರೂ ತಿಳಿದಿದ್ದರು. ಆದರೆ ನಾವಿಕರು ತಮ್ಮ ಮೇಲೆ ಯೋನನ ರಕ್ತದ ಅಪರಾಧವನ್ನು ಹಾಕದಂತೆ ದೇವರಲ್ಲಿಪ್ರಾರ್ಥಿಸಿದರು; ಬಹುಶಃ ಆ ಪ್ರಾರ್ಥನೆಗೆ ಪ್ರತಿಕ್ರಿಯೆಯಾಗಿ, ನಾವು ಓದುತ್ತೇವೆ: ಸರ್ವೇಶ್ವರಸ್ವಾಮಿಯ ಆಜ್ಞಾನುಸಾರ ದೊಡ್ಡ ಮೀನೊಂದು ಬಂದು ಯೋನನನ್ನು ನುಂಗಿತು. ಅವನು ಅದರ ಹೊಟ್ಟೆಯಲ್ಲಿ ಮೂರು ಹಗಲು, ಮೂರು ಇರುಳು ಇದ್ದನು (v. 17). ಹೀಗಾಗಿ, ಯೋನನು ಮುಳುಗುವುದರಿಂದ ರಕ್ಷಿಸಲು ದೇವರು "ನೇಮಿಸಿದ" ಸಾಧನ ದೊಡ್ಡಮೀನು!ದೊಡ್ಡಮೀನು ಅವನನ್ನು ಕೊಲ್ಲುವುದಿಲ್ಲ,ಬದಲಿಗೆ, ಅವನನ್ನು ರಕ್ಷಿಸುತ್ತದೆ.ಆ ನಂತರ ನಾವು ಓದುತ್ತೇವೆ: ಆ ಮೀನಿನ ಹೊಟ್ಟೆಯೊಳಗಿಂದಲೇ ಯೋನನು ಸರ್ವೇಶ್ವರಸ್ವಾಮಿಗೆ ಪ್ರಾರ್ಥನೆ ಮಾಡಿದನು(ಅ 2:1), ಆ ಪ್ರಾರ್ಥನೆಒಂದು ಕೀರ್ತನೆಯ ರೀತಿಯಿದೆ. “ಕೃತಜ್ಞತಾಕೀರ್ತನೆಗಳು”ಒಂದು ಸಣ್ಣ ಹೇಳಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಯೋನನ ಪ್ರಾರ್ಥನೆಯಲ್ಲಿ ಇದನ್ನುಹೀಗೆಕಾಣುತ್ತೇವೆ:
ಸಂಕಟದಲಿ, ಸರ್ವೇಶ್ವರಾ, ನಾ ನಿನಗೆ ಮೊರೆಯಿಟ್ಟೆ
ನೀನೆನ್ನ ಮೊರೆಗೆ ಕಿವಿಗೊಟ್ಟೆ.
ಪಾತಾಳದಂತರಾಳದಿಂದ ನಿನ್ನ ನೆರವನ್ನು ಬೇಡಿದೆ
ನೀನೆನ್ನ ಪ್ರಾರ್ಥನೆಯನ್ನಾಲಿಸಿದೆ (ಯೋನ2:2).
ಇದು ನಾವು ಮುಂದೆಓದಲಿರುವ ಸಂಪೂರ್ಣ ಕೀರ್ತನೆಯ ಸಾರಾಂಶ.ಯೋನ ಸಂಕಷ್ಟದಲ್ಲಿದ್ದಾಗ ದೇವರನ್ನು ಕರೆದನು ಮತ್ತು ದೇವರು ಅವನಿಗೆಪ್ರತಿಕ್ರಿಯಿಸಿದರು.

“ಕೃತಜ್ಞತಾಕೀರ್ತನೆಗಳು” ಸಾಮಾನ್ಯವಾಗಿ ಒಬ್ಬವ್ಯಕ್ತಿ ಯಾವ ರೀತಿಯ ಸಂಕಷ್ಟದಲ್ಲಿದ್ದನೆಂಬ ವಿವರಣೆಯನ್ನು ನೀಡುತ್ತವೆ, ಇಲ್ಲಿಯೂ ಅದನ್ನು ಕಾಣಬಹುದು.
ಸಾಗರದಉದರಕೆನೀನೆನ್ನತಳ್ಳಿರುವೆ
ಅಗಾಧಜಲದೊಳಗೆದೂಡಿರುವೆ.
ಸುತ್ತಮುತ್ತಲಿದೆಪ್ರವಾಹದಹೊಡೆತ
ಮೇಲ್ಗಡೆಅಬ್ಬರಿಪಅಲೆಗಳಭೋರ್ಗರೆತ!

ನಿನ್ನಸನ್ನಿಧಿಯಿಂದನಾನಿನ್ನುಬಹಿಷ್ಕೃತ
ಕಾಣೆನೆಂದೂನಿನ್ನಪವಿತ್ರಾಲಯನಿರುತ.
ಈಭಾಗ್ಯಗಳೆಲ್ಲಎನಗಿಲ್ಲವೆಂದು
ಪರಿಪರಿಯಾಗಿಮರುಗುತಿರುವೆನಿಂದು.

ಸುತ್ತುವರಿಯೆಜಲರಾಶಿ, ಉಸಿರು ಕಟ್ಟಿದಂತಾಯ್ತು
ಸಾಗರವು ಸಂಪೂರ್ಣವಾಗೆನ್ನ ಆವರಿಸಿತು;
ಎನ್ನ ಶಿರವನು ಜೊಂಡು ಸುತ್ತುಗಟ್ಟಿತು (ವ 3-5).

ಇದನ್ನು ಗಮನಿಸಿದರೆನಮಗೆತಿಳಿಯುತ್ತದೆ: ಇದು ದೊಡ್ಡಮೀನಿನಹೊಟ್ಟೆಯಲ್ಲಿದ್ದಾಗ ಆದ ಅನುಭವವಲ್ಲ, ಅದಕ್ಕೂ ಮುನ್ನ ನಡೆದದ್ದು. ದೇವರು ನನ್ನನ್ನು ಆಳದಲ್ಲಿ, ಸಮುದ್ರದ ಹೃದಯದಲ್ಲಿ ಹಾಕಿದರು, ಪ್ರವಾಹ ನನ್ನನ್ನು ಸುತ್ತುವರೆದಿದೆ ಮತ್ತು ನಿಮ್ಮ ಅಲೆಗಳಿಂದ ಮುಳುಗಿದೆನು.

ಯೋನ ತನ್ನನ್ನು ತಾನು ದೇವರಿಂದ ಪರಿತ್ಯಕ್ತನಾಗಿರುವೆನು ಎಂದು ಗ್ರಹಿಸಿದನು, ಮತ್ತೆ ದೇವರ ದೇವಾಲಯವನ್ನು ನೋಡುವ ಹತಾಶೆಯಲ್ಲಿದ್ದನು, ಸಾಯುವ ನಿರೀಕ್ಷೆಯಲ್ಲಿದ್ದನು.ಅವನು ಈಗ "ಜಲಗಳಿಂದ" ಆವರಿಸಲಾಗಿದ್ದಾನೆ, "ಆಳ"ದ ಮಧ್ಯದಲ್ಲಿಮತ್ತು ಅವನು ಸಮುದ್ರದ ತಳಕ್ಕೆ "ಪರ್ವತಗಳ ತಳಹದಿಗೆ" ಇಳಿಯುತ್ತಾನೆ, ಅಲ್ಲಿ "ನನ್ನ ಶಿರವನು ಜೊಂಡು ಸುತ್ತುಗಟ್ಟಿತು"ಎನ್ನುತ್ತಾನೆ. ಇವುಗಳಲ್ಲಿ ಯಾವುದೂ ಯೋನ ಸತ್ತಿದ್ದಾನೆಂದು ವಿವರಿಸುವುದಿಲ್ಲ. ಅವನು ನೀರಿನಲ್ಲಿ ಜೀವಂತವಾಗಿದ್ದಾಗ - ತಿಮಿಂಗಿಲ ಅವನನ್ನು ನುಂಗುವ ಮೊದಲು ಅವನಿಗೆ ಏನಾಯಿತು ಎಂಬುದನ್ನು ಇದು ವಿವರಿಸುತ್ತಿದೆ.
ನಂತರ ನಾವು ನೋಡುತ್ತೇವೆ:
ಪರ್ವತಗಳ ತಳಹದಿಗೆ ದೇವಾ, ನಾನಿಳಿದೆ
ಮುಚ್ಚಿಕೊಂಡವು ಜಗದ ದ್ವಾರಗಳು ನನ್ನ ಹಿಂದೆ(ವ. 6ಅ).
ಇದು ಮರಣದ ಪ್ರಸ್ತಾಪ, ಸ್ಪಷ್ಟವಾಗಿ ಒಂದುಅತಿಶಯೋಕ್ತಿ; ಸಾವಿನ ದ್ವಾರಗಳು ಇನ್ನೂ ಶಾಶ್ವತವಾಗಿ ಮುಚ್ಚಲಿಲ್ಲ ಏಕೆಂದರೆ, ನಾವು ಮತ್ತೆ ಓದುತ್ತೇವೆ:
ಎನ್ನ ಕಾಪಾಡಿದೆ ಅಂಥ ಕೋಪದಿಂದ
ಸರ್ವೇಶ್ವರಾ, ಮೇಲಕ್ಕೆತ್ತಿದೆಯೆನ್ನ ಜೀವಸಹಿತ(ವ. 6ಆ).
ಅಂದರೆ,ಯೋನ ಬಹುತೇಕ ಸತ್ತುಹೋಗಿದ್ದ, ಆದರೆ ಪೂರ್ತಿಯಾಗಿ ಇನ್ನೂಮರಣಿಸಿರಲಿಲ್ಲ. ಆಗಲೇ, ದೇವರು ತಿಮಿಂಗಿಲವನ್ನು ಕಳುಹಿಸಿದರು,"ಮೇಲಕ್ಕೆತ್ತಿದೆಯೆನ್ನ ಜೀವಸಹಿತ." ಯೋನ ಸಮುದ್ರದ ತಳದಲ್ಲಿದ್ದನು, ಅವನ ತಲೆ ಕಡಲಕಳೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು, ಅವನು ಮುಳುಗುತ್ತಿದ್ದನು, ಆದರೆ ದೇವರಿಂದ ಬಂದ ತಿಮಿಂಗಿಲ ಅವನನ್ನು ರಕ್ಷಿಸಿತು.

ಕೀರ್ತನೆಗಳಲ್ಲಿ ಕಾವ್ಯಾತ್ಮಕವಾದ, "ಪಾತಾಳ"ಕ್ಕೆ ಇಳಿದಅಥವಾ “ಆಕಾಶಕ್ಕೇರಿದ” ಉಲ್ಲೇಖಗಳು ಯಾರಾದರೂ ಅಕ್ಷರಶಃ ಸಾಯುತ್ತಿದ್ದಾರೆ ಅಥವಾ ಏರುತ್ತಿದ್ದಾರೆ ಎಂದು ಅರ್ಥವಲ್ಲ. ಹೀಗೆ, ದಾವೀದರಸ ತನ್ನನ್ನು ಅಪಾಯಕಾರಿ ಕಾಯಿಲೆಯಿಂದ ರಕ್ಷಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳನ್ನುಹೀಗೆ ವ್ಯಕ್ತಪಡಿಸುತ್ತಾನೆ, “ಪಾತಾಳದಿಂದೆನ್ನ ಪ್ರಾಣವನು ಮೇಲೆತ್ತಿದೆ, ಎನ್ನ ಬದುಕಿಸಿದೆ ದೇವಾ, ಸಮಾಧಿ ಸೇರಗೊಡದೆ” (ಕೀರ್ತ. 30:3).
ವ್ಯಕ್ತಿಯ ದೊಡ್ಡ ಸಂಕಟವನ್ನು ವಿವರಿಸಿದ ನಂತರ, ವ್ಯಕ್ತಿಯು ದೇವರಿಗೆ ಹೇಗೆ ಮೊರೆಯಿಟ್ಟರು ಎಂಬುದರ ವಿವರಣೆಯನ್ನು “ಕೃತಜ್ಞತಾ ಕೀರ್ತನೆ”ಗಳು ನಮಗೆ ನೀಡುತ್ತದೆ, ಅದನ್ನು ನಾವು ಇಲ್ಲಿಯೂ ಕಾಣುತ್ತೇವೆ:
ನಂದಿದಂತಾಗಲು ಎನ್ನ ಪ್ರಾಣ ದೀವಿಗೆ
ಮೊರೆಯಿಟ್ಟೆ, ಸರ್ವೇಶ್ವರಾ, ನಾ ನಿನಗೆ
ನಿನ್ನ ಪರಿಶುದ್ಧ ಆಲಯದಲಿ ನೀನಾಸೀನನಿದ್ದೆ
ಎನ್ನ ಪ್ರಾರ್ಥನೆಯನು ನೀನಾಲಿಸಿದೆ.(ವ. 7).
ಇದರರ್ಥ ಯೋನ ಇನ್ನೂ ಜೀವಂತವಾಗಿದ್ದ! ಅವನು ಸಮುದ್ರದ ತಳದಲ್ಲಿದ್ದಾಗ, ಅವನು ಮೂರ್ಛೆ ಹೋಗುತ್ತಿದ್ದಾಗ (ಆಮ್ಲಜನಕಖಾಲಿಯಾಗುತ್ತಿದೆ!)ಅವನು ದೇವರನ್ನು ನೆನಪಿಸಿಕೊಳ್ಳುತ್ತಾನೆ ಮತ್ತು ಪ್ರಾರ್ಥಿಸುತ್ತಾನೆ. ಆಗ ದೇವರು ಅವನನ್ನು ರಕ್ಷಿಸಲು ತಿಮಿಂಗಿಲವನ್ನು ಕಳುಹಿಸಿದರು.
“ಕೃತಜ್ಞತೆಯ ಕೀರ್ತನೆ”ಗಳು ಸಾಮಾನ್ಯವಾಗಿ ಹೊಗಳಿಕೆ, ನಿಜವಾದ ದೇವರೆಂದು ದೇವರಿಗೆ ಸಾಕ್ಷ್ಯ ಮತ್ತು ಪ್ರತಿಜ್ಞೆ ಮುಂತಾದ ವಿಷಯಗಳೊಂದಿಗೆ ಕೊನೆಗೊಳ್ಳುತ್ತವೆ, ಅದನ್ನು ನಾವು ಇಲ್ಲಿ ಕಾಣಬಹುದು:
ನಿರರ್ಥಕ ವಿಗ್ರಹಗಳನಾರಾಧಿಪ ಜನರು
ತೊರೆದಿಹರು ಹಾರ್ದಿಕ ಭಕ್ತಿಯನು
ನಾನಾದರೋ ಹಾಡಿ ಹೊಗಳುವೆ ನಿನ್ನನು
ನಿನಗರ್ಪಿಸುವೆ ಸಮರ್ಪಕ ಬಲಿಯನು
ಬಿಡದೆ ಸಲ್ಲಿಸುವೆ ಹೊತ್ತ ಹರಕೆಯನು
ಹೊಂದುವೆ ಸ್ವಾಮಿಯಿಂದಲೆ ರಕ್ಷಣೆಯನು (ವ. 8-9).
ಕೊನೆಯ ಸಾಲಿನಲ್ಲಿ “ಸ್ವಾಮಿ” ಪದದಮೂಲ “ಯಹೊವಾ”ಅಂದರೆ, ಕೊನೆಯ ಸಾಲಿನಸರಿಯಾದಅನುವಾದ"ರಕ್ಷಣೆಸರ್ವೇಶ್ವರನಿಂದ" ಎಂಬುದು. ಆ ನಂತರ ನಾವುಓದುತ್ತೇವೆ, " ಸರ್ವೇಶ್ವರಸ್ವಾಮಿಯ ಆಜ್ಞೆಯ ಪ್ರಕಾರ ಆ ಮೀನು ಯೋನನನ್ನು ದಡದ ಮೇಲೆ ಕಕ್ಕಿತು” (v. 10).
ಸಾರಾಂಶವಾಗಿಹೇಳಬೇಕೆಂದರೆ:ಯೋನ ಹಡಗಿನಲ್ಲಿ ದೇವರಿಂದ ದೂರಓಡಿಹೋಗಲುಪ್ರಯತ್ನಿಸಿದನು; ಇದು ತೀವ್ರ ಚಂಡಮಾರುತವನ್ನು ತಂದಿತು; ಯೋನನೇಇದಕ್ಕೆ ಕಾರಣವೆಂದು ಗುರುತಿಸಿದಾಗ, ಅವನನ್ನು ಸಮುದ್ರಕ್ಕೆ ಎಸೆಯುವುದೇಮಾರ್ಗ ಎಂದು ಹೇಳಿದನು. ನಾವಿಕರು ವಿರೋಧಿಸಿದರು ಆದರೆ ಚಂಡಮಾರುತ ಇನ್ನೂ ಗಂಭೀರವಾಯಿತು. ನಂತರ ಅವರು ಯೋನನ ಸಾವಿಗೆತಮ್ಮನ್ನು ತಪ್ಪಿತಸ್ಥರಾಗಿಮಾಡಬೇಡಿ ಎಂದು ದೇವರನ್ನು ಪ್ರಾರ್ಥಿಸಿ ಅವನನ್ನು ಸಮುದ್ರಕ್ಕೆ ಎಸೆದರು.
ನಂತರ,ಯೋನ ಬಹುತೇಕ ಸಮುದ್ರದ ತಳದವರೆಗೂ ಮುಳುಗಿಹೋದನುಎಂದು ವಿವರಿಸಲಾಗಿದೆ, ಆದರೆ ಅವನು ದೇವರನ್ನು ನೆನೆದುಪ್ರಾರ್ಥಿಸಿದನು ಹಾಗೂ ದೇವರು ಅವನನ್ನು ರಕ್ಷಿಸಲು ತಿಮಿಂಗಿಲವನ್ನು ಕಳುಹಿಸಿದನು. ಅವನು ತಿಮಿಂಗಿಲದಲ್ಲಿ ಮೂರು ಹಗಲು-ರಾತ್ರಿಗಳನ್ನು ಕಳೆದನು ಮತ್ತು ರಕ್ಷಣೆಗಾಗಿ ಕೃತಜ್ಞತೆಯ ಕೀರ್ತನೆಯನ್ನು ಪ್ರಾರ್ಥಿಸಿದನು. ಆಮೇಲೆ ತಿಮಿಂಗಿಲಅವನನ್ನು ಒಣ ಭೂಮಿಗೆ ಉಗುಳಿತು.ಇದು ಈ ಪಠ್ಯಭಾಗದ ಸರಳ ಓದುವಿಕೆ.
ಯೋನನ ಕಥೆಯಲ್ಲಿ ತಿಮಿಂಗಿಲದ ಕಾರ್ಯವನ್ನು ಅತ್ಯಂತ ಅಸ್ವಾಭಾವಿಕ ಅರ್ಥದಲ್ಲಿ ತೆಗೆದುಕೊಳ್ಳಲಾಗುತ್ತದೆ. ತಿಮಿಂಗಿಲ ಯೋನನನ್ನು ನುಂಗಿದುದರಿಂದಅವನು ಸಾಯಲಿಲ್ಲ, ಬದಲಾಗಿ, ಅದು ಅವನನ್ನು ಸಾವಿನಿಂದ ರಕ್ಷಿಸಿತು.ಅವನು ಸಮುದ್ರದ ತಳದಲ್ಲಿ ಇನ್ನೂ ಜೀವಂತವಾಗಿದ್ದ ಎಂದು ಪವಿತ್ರಗ್ರಂಥ ತಿಳಿಸುತ್ತದೆ, ಅವನುಹೇಳಿಕೊಂಡ, "ನಂದಿದಂತಾಗಲು ಎನ್ನ ಪ್ರಾಣ ದೀವಿಗೆ" ಅವನು ದೇವರನ್ನು ಪ್ರಾರ್ಥಿಸಿದನು. ಅವನು ತಿಮಿಂಗಿಲದೊಳಗೆ ಜೀವಂತವಾಗಿದ್ದನು, ಅವನು ತನ್ನ ಕೃತಜ್ಞತಾ ಸ್ತೋತ್ರವನ್ನು ಪ್ರಾರ್ಥಿಸಿದಾಗ, "ರಕ್ಷಣೆಸರ್ವೇಶ್ವರನಿಂದ!"ಎಂದು ಕಂಡುಕೊಂಡ. ವಾಸ್ತವವಾಗಿ, ಇಲ್ಲಿಅವನು ಸತ್ತುಜೀವಕ್ಕೆ ಮರಳಿದನು ಎಂದು ಹೇಳಲು ಸಾಧ್ಯವಾಗುತ್ತಿಲ್ಲ (ಯೋನ, 2:1-2). ಅಂತಿಮವಾಗಿ, ಯೋನ ಮರಣಹೊಂದಿಪುನರುತ್ಥಾನಗೊಂಡಿದ್ದರೆ, ಅದು ದೊಡ್ಡ ಮೀನಿನಿಂದ ರಕ್ಷಿಸಲಾದುದಕ್ಕಿಂತದೊಡ್ಡಅದ್ಭುತವಾಗುತ್ತಿತ್ತು.
ಇದು ಕೇವಲ ಒಂದು ಕೀರ್ತನೆಯಲ್ಲಿ ಕಾವ್ಯಾತ್ಮಕ ಪ್ರಸ್ತಾಪವಾಗಿನೀಡಲುಆಗುತ್ತಿರಲಿಲ್ಲ,ಅವುಗಳು ಅತಿಶಯೋಕ್ತಿಮಾತುಗಳು. ಯೋನ ಸಮುದ್ರದ ತಳದಲ್ಲಿ ಅಥವಾ ತಿಮಿಂಗಿಲದಹೊಟ್ಟೆಯಲ್ಲಿ ಇನ್ನೂ ಜೀವಂತವಾಗಿದ್ದ ಎಂಬುದರಉದ್ದೇಶಅವನಮರಣದಬಗ್ಗೆಹೇಳುವುದಕ್ಕಲ್ಲ,ಮರಣದ ಸಮಯದಲ್ಲಿ ಅವನಿಗೆದೊರೆತದೇವರ ರಕ್ಷಣೆಯಬಗ್ಗೆ.
ಯೇಸು ಹೇಳುತ್ತಾರೆ: “ಯೋನನು ಮೂರು ಹಗಲು-ರಾತ್ರಿ ದೊಡ್ಡ ಮೀನಿನ ಉದರದಲ್ಲಿದ್ದನು. ಅದರಂತೆಯೇ ನರಪುತ್ರನು ಮೂರುದಿನ ಹಗಲು ರಾತ್ರಿ ಭೂಗರ್ಭದಲ್ಲಿರುವನು” (ಮತ್ತಾ. 12:40). ಯೋನ ಬಹುತೇಕ ಮರಣಹೊಂದಿದ್ದನು ಮತ್ತು ತಿಮಿಂಗಿಲದ ಮೂಲಕಮರಣದಿಂದರಕ್ಷಿಸಲಾದನು, ಆದರೆ ಯೇಸು ನಿಜವಾಗಿಯೂ ಮರಣಹೊಂದಿದ್ದರು ಮತ್ತು ಅವರು ಪುನರುತ್ಥಾನಗೊಂಡರು. ಇದು ಯೋನ ಪಡೆದ ವಿಮೋಚನೆಗಿಂತ ದೊಡ್ಡದಾದುದು, ಏಕೆಂದರೆ "ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ" (ಮತ್ತಾ. 12:41).

[ಈ ಬರವಣಿಗೆ https://www.catholic.com/magazine/online-edition/did-jonah-die-in-the-whale ಇದರಭಾವಾನುವಾದ.]